*ಶ್ರೀ ವಿಜಯದಾಸರ ನೈವೇದ್ಯ ಸುಳಾದಿ: ಶ್ರೀ ಪತಿಗೆ ನೈವೇದ್ಯ ಕೊಡುವುದು*
ಬಾಲಗೋಪಾಲ ಸುಶೀಲ ಸಜ್ಜನ ಪಾಲ ll ಪ ll
ಶ್ರೀಲೋಲ ಗುಣಶೀಲ ಶ್ರೀ ತುಳಸಿಯಮಾಲ
ಶ್ರೀ ಲಕುಮಿಯ ಲೋಲ ಬಾಲ ಸುರಮುನಿ ಪಾಲ ll ಅ ಪ ll
ಕಂದರಿಲ್ಲದ ಬಹುನಿಂದ್ಯದ ಜನುಮವ
ಪೊಂದಿದೆ ವ್ಯರ್ಥದಿ ಇಂದಿರೆ ರಮಣನೆ ll 1 ll
ಬಾಲಲೀಲೆಗಳಿಂದ ಬಾಲಹಾಡುತಲಿರೆ
ಲಾಲಿಸಿ ಹರುಷಿಪ ಕಾಲಕಾಣೆನೊ ದೇವ ll 2 ll
ಅಂಬೆಗಾಲಿಕ್ಕುತ ಕಂದರಾಡುತ ಬರೆ
ಚಂದದಿಂದೆತ್ತುವಾನಂದವಿಲ್ಲವೋ ದೇವ ll 3 ll
ಕಡಗಗಗ್ಗರಿಗೆಜ್ಜೆ ಘಲುರೆಂಬೊನಾದದ
ಧ್ವನಿ ಕೇಳದ್ಹೋದ ಈ ಕಿವಿಗಳು ವ್ಯರ್ಥವು ll 4 ll
ಪಾಂಡುರಂಗನೆ ನಿನ್ನ ನಂಬಿ ನಾ ಸ್ತುತಿಸುವೆ
ನಿಂದೆಯ ಕಳದೆನ್ನ ಚಂದದಿಂ ಪಾಲಿಸೊ ll 5 ll
ಶ್ರೀಶ ಶ್ರೀಮಾಧವ ಕೂಸಿನ ಪಾಲಿಸಿ
ದಾಸಿಯ ಮನದಾಸೆ ನೀ ಸಲಿಸೈ ದೇವ ll 6 ll
ಬಾಲಕನಾದರೆ ಆಳನುಮಾಡುವೆ
ಬಾಲಕಿಯಾದರೆ ಧಾರೆಯನೆರೆಯುವೆ ll 7 ll
ಸಾಸಿರ ನಾಮನೆ ಭೂಸುರ ಪಾಲನೆ
ಕ್ಲೇಶ ನಾಶಕ ಕೃಷ್ಣ ನಾ ಶಿರಬಾಗುವೆ ll 8 ll
ಕಮಲನಾಭವಿಟ್ಠಲ ನಮಿಸಿ ಬೇಡುವೆ ನಿನ್ನ
ಶ್ರಮವ ಪರಿಹರಿಸೆನ್ನ ಭ್ರಮೆಯ ತಪ್ಪಿಸೋದೇವ ll 9 ll
#ಬಾಲಲೀಲೆಗಳಿಂದ #ಬಾಲಹಾಡುತಲಿರೆ
#ಲಾಲಿಸಿ #ಹರುಷಿಪ #ಕಾಲಕಾಣೆನೊ #ದೇವ ll 2 ll
#ಅಂಬೆಗಾಲಿಕ್ಕುತ #ಕಂದರಾಡುತ #ಬರೆ
#ಚಂದದಿಂದೆತ್ತುವಾನಂದವಿಲ್ಲವೋ #ದೇವ ll 3 ll
#ಶ್ರೀವಿಜಯದಾಸರ #ನೈವೇದ್ಯ #ಸುಳಾದಿ:ಶ್ರ ಪತಿಗೆ #ನೈವೇದ್ಯಕೊಡುವುದು #BabyDanceCartoonVideo #ಜಶ್ವಿತ್ #okkaliga
#Bengalururural #palya #horticulture
https://youtu.be/WRK9yxZ0m58?si=WTLsXmWS7QuLqr4y